ಬುಧವಾರ, ನವೆಂಬರ್ 16, 2011

ಭೈರಾಗಿ..!

ಬದುಕ ತೊರೆದು 
ಭೈರಾಗಿಯಾಗಲಿರುವೆ
ಹೇಳು ಹುಡುಗಿ...
ಮುಂದೊಂದು ದಿನ
ನಿನ್ನ ಮನೆಯ
ಮುಂದೆ ಕುಳಿತು
'ಭವತೀ ಭಿಕ್ಷಾಂದೇಹಿ'
ಎಂದರೆ 
ನೀ ಏನ ನೀಡುವೆ...?

ನೀ ಕಳೆದ
ಬದುಕಿನುತ್ಸಾಹವ
ಮರಳಿಸುವೆಯ,
ಛಿದ್ರಗೊಂಡ ನನ್ನ
ಹೃದಯವ ಕೂಡಿಸಿ
ಪೋಣಿಸಿ ಕೊಡುವೆಯ
ಅಥವಾ "ತನ್ನಿಂದ
ಇವ ಇಂತಾದನಲ್ಲ"
ಎಂದು ಮರುಗುವೆಯ


ಬೇಡ ಅದಾವುದೂ
ಬೇಡ, ನಾ ಬೇಡಿ
ಬಂದಿರುವೆ ಪ್ರೀತಿಯ
ಸುರಿಸದೇ, ಪ್ರೇಮ
ಮಮತೆಗಳ ಬೆರೆಸದೇ
ಸತ್ತ ನೆನೆಪನು
ತರಿಸದೇ ಮಾಡಿದ
ಮುರುಕು ರೊಟ್ಟಿ

ಅಷ್ಟೇ ಸಾಕು...
ಬದುಕ ತೊರೆದ ಭೈರಾಗಿ ಇವ...!


-ಶರತ್ ಚಕ್ರವರ್ತಿ.
ದಿನಾಂಕ: 16.11.2011

2 ಕಾಮೆಂಟ್‌ಗಳು:

  1. ನೀವು ಭೈರಾಗಿ ಆಗುವುದು ಬೇಡ ಮಿತ್ರ, ಆಕೆಯ ಮನೆ ಮುಂದೆ ಕನ್ನಡ ಬ್ಲಾಗ್ ಮಿತ್ರರೆಲ್ಲ ಧರಿಣಿ ಕೂತಾದ್ರೂ ಒಪ್ಪಿಸಿ ಹಸೆ ಮಣೆ ಏರಿಸೇ ತೀರುತ್ತೇವೆ.

    ನಿಮ್ಮ ಶೈಲಿಯಲ್ಲಿ ಮೃದುತ್ವವಿದೆ. ಭೇಷ್!

    ನನ್ನ ಬ್ಲಾಗಿಗೂ ನಿಮಗೆ ಆತ್ಮೀಯ ಸ್ವಾಗತ.
    www.badari-poems.blogspot.com

    ಪ್ರತ್ಯುತ್ತರಅಳಿಸಿ
  2. ಹ್ಹ ಹ್ಹ ಬದರೀನಾಥ ಸರ್ ಸಂತೋಷವಾದೆನು. ಆದರೆ ಇದು ನನ್ನ ಮನದ ಆಶಯ ಎನ್ನುವುದಕ್ಕಿಂತ 'ಕ್ರೌಂಚವಧೆ' ಕಾದಂಬರಿ ಓದುತ್ತಾ ಸನ್ನಿವೇಶವೊಂದಕ್ಕೆ ಹುಟ್ಟಿದ ಸಾಲುಗಳು. ಧನ್ಯವಾದಗಳು ಸರ್.

    ಪ್ರತ್ಯುತ್ತರಅಳಿಸಿ