ನಿಶ್ಚಲ ಅಂಧಕಾರವ ಬೆಳಗಿದೆ ಕತ್ತಲಜ್ಯೋತಿ
ಮನ-ಮನೆಯ ತುಂಬೆಲ್ಲಾ ಆವಿರ್ಭವಿಸಿದೆ
ದಿಗ್ಮೂಡತೆ ಕಿಟಕಿ ಗೋಡೆಗಳ ಸದ್ದಿಲ್ಲದೆ ತಿಂದು
ಹೊಟ್ಟೆಯುಬ್ಬಿಸಿ ಮಲಗಿದೆ ಕರಿಮಸಿಗತ್ತಲೆ
ಇಲ್ಲೆಲ್ಲವೂ ನಿಶ್ಚಲ..
ಗಾಳಿಯಾಡಿದೆ ನಿಯ್ಯೋ ಮರ್ರೋ ಅರ್ತನಾದ
ಅಲ್ಲಲ್ಲಿ ಬಾವಲಿಗಳು ಬಡಿದಂತೆ ರೆಕ್ಕೆಗಳ
ತೆಂಗಿನ ಗರಿಗಳ ಸದ್ದು
ಆಚೆಗೋಡೆಯಿದ್ದ ಪಕ್ಕದಿಂದೊಂದು ಹೊರಟ
ನಿಟ್ಟುಸಿರ ರವಕೆ ರವೆಯಷ್ಟು ಅಲುಗಿಲ್ಲ
ಕಿವಿಗಡಚಿಕ್ಕೋ ಮೌನ
ಸ್ಪಷ್ಟ ಆಕಾರವಿಲ್ಲ ಆಲೋಚನೆಯಿಲ್ಲ
ಇದ್ದರೂ, ಕತ್ತಲೆಗದರ ಅರಿವಿಲ್ಲ
ಅರಿವನ್ನೇ ಅರಿದು ನುಂಗಿದ ಅಂಧಕಾರ
ಹಗಲುವೇಷದ ಚಂಚಲಬಾಹುಗಳ ಸುಟ್ಟು
ಸುಡುತ್ತಲೇ ಬೆಳಗಿದೇ ಕತ್ತಲಜ್ಯೋತಿ.
-ಶರತ್ ಚಕ್ರವರ್ತಿ.
ಮನ-ಮನೆಯ ತುಂಬೆಲ್ಲಾ ಆವಿರ್ಭವಿಸಿದೆ
ದಿಗ್ಮೂಡತೆ ಕಿಟಕಿ ಗೋಡೆಗಳ ಸದ್ದಿಲ್ಲದೆ ತಿಂದು
ಹೊಟ್ಟೆಯುಬ್ಬಿಸಿ ಮಲಗಿದೆ ಕರಿಮಸಿಗತ್ತಲೆ
ಇಲ್ಲೆಲ್ಲವೂ ನಿಶ್ಚಲ..
ಗಾಳಿಯಾಡಿದೆ ನಿಯ್ಯೋ ಮರ್ರೋ ಅರ್ತನಾದ
ಅಲ್ಲಲ್ಲಿ ಬಾವಲಿಗಳು ಬಡಿದಂತೆ ರೆಕ್ಕೆಗಳ
ತೆಂಗಿನ ಗರಿಗಳ ಸದ್ದು
ಆಚೆಗೋಡೆಯಿದ್ದ ಪಕ್ಕದಿಂದೊಂದು ಹೊರಟ
ನಿಟ್ಟುಸಿರ ರವಕೆ ರವೆಯಷ್ಟು ಅಲುಗಿಲ್ಲ
ಕಿವಿಗಡಚಿಕ್ಕೋ ಮೌನ
ಸ್ಪಷ್ಟ ಆಕಾರವಿಲ್ಲ ಆಲೋಚನೆಯಿಲ್ಲ
ಇದ್ದರೂ, ಕತ್ತಲೆಗದರ ಅರಿವಿಲ್ಲ
ಅರಿವನ್ನೇ ಅರಿದು ನುಂಗಿದ ಅಂಧಕಾರ
ಹಗಲುವೇಷದ ಚಂಚಲಬಾಹುಗಳ ಸುಟ್ಟು
ಸುಡುತ್ತಲೇ ಬೆಳಗಿದೇ ಕತ್ತಲಜ್ಯೋತಿ.
-ಶರತ್ ಚಕ್ರವರ್ತಿ.
ನಟರಾಜು ಅವರ ಬ್ಲಾಗ್ ಮೂಲಕ ನಿಮ್ಮ ಬ್ಲಾಗ್ ಬಗ್ಗೆ ತಿಳಿಯಿತು... ನೀವೂ ಹಾಸನದವರೆಂದು ತಿಳಿದು ಸಂತೋಷವಾಯಿತು...ನಿಮ್ಮ ಹಳೆಯ ಬರಹಗಳನ್ನೂ ಓದಿದೆ... ಚೆನ್ನಾಗಿವೆ... ಹೀಗೆ ಬರೆಯಿತ್ತಿರಿ..ಶುಭವಾಗಲಿ...
ಪ್ರತ್ಯುತ್ತರಅಳಿಸಿಧನ್ಯವಾದಗಳು ಸರ್, ಹೀಗೆಯೇ ಓದುತ್ತಿರಿ.
ಅಳಿಸಿನಟರಾಜುರವರ ಮೂಲಕ ಇಲ್ಲಿಗೆ ಬಂದದ್ದು.
ಪ್ರತ್ಯುತ್ತರಅಳಿಸಿನಿಮ್ಮ ಶೀರ್ಷಿಕೆಗಳೇ ಅನುಪಮವಾಗಿವೆ.
ಬರೆಯುತ್ತಿರಿ.
ಸ್ವರ್ಣಾ
ಖಂಡಿತವಾಗಿಯು ಬರೆಯುತ್ತಿರುತ್ತೇನೆ. ಧನ್ಯವಾದಗಳು, ಹೀಗೆಯೇ ಓದುತ್ತಿರಿ.
ಅಳಿಸಿಒಳ್ಳೆಯ ಕವನ ಗೆಳೆಯ, ಒಂದು ಗಾಢ ಅನುಭೂತಿ ಇದೆ.
ಪ್ರತ್ಯುತ್ತರಅಳಿಸಿಧನ್ಯವಾದಗಳು ಸರ್,
ಅಳಿಸಿಎಲ್ಲಾ ಬರಹಗಾರರಿಗೂ ನನ್ನದೊಂದು ಮನವಿ. ಬ್ಲಾಗ್ ಲೋಕ ಸರಣಿ ಪ್ರಕ್ರಿಯೆ ಇದ್ದಂತೆ, ಹಲವು ಬ್ಲಾಗುಗಳನ್ನು ಓದಿದಾಗಲೇ ಕಾವ್ಯದ ಹರಿವೂ ಗೊತ್ತಾಗುವುದು. ಬೇರೆಯವರ ಬ್ಲಾಗುಗಳನ್ನೇ ಓದದೆ, ತಮ್ಮ ಬ್ಲಾಗುಗಳನ್ನು ನೋಡುಗರಿಲ್ಲದೆ ಕಳೆವ ಲೇಖಕರಿದ್ದಾರೆ. ಸ್ವಲ್ಪ ಪ್ರಯತ್ನ ಪಟ್ಟರೆ ಹಲವು ಬ್ಲಾಗುಗಳ ಲಿಂಕ್ ಸಿಗುತ್ತದೆ. ಓದುವ ಹುರುಪು ಇರಬೇಕಷ್ಟೇ.
ಪ್ರತ್ಯುತ್ತರಅಳಿಸಿನನ್ನ ಬಳಿ ಸಧ್ಯಕ್ಕೆ ಕಂಫ್ಯೂಟರ್ ಇಲ್ಲದ ಕಾರಣ ನಾನು ಇತರರ ಬ್ಲಾಗ್ ಮೇಲೆ ಕಣ್ಣಾಡಿಸಲು ಸಾಧ್ಯವಾಗಿಲ್ಲ ಬದರಿ ಸರ್, ಅದ್ದರಿಂದಲೇ ನನ್ನ ಬ್ಲಾಗ್ ಕೂಡ ಬಣಗುಡುತ್ತಿದೆ.
ಅಳಿಸಿಚಿತ್ರಿತ ಬರಹಕ್ಕೊ೦ದು ಚಿತ್ರ ಚಿ೦ತನೆ ಬೇಕು ..
ಪ್ರತ್ಯುತ್ತರಅಳಿಸಿಸಮಗ್ರ ಚಿ೦ತನೆಗೊ೦ದು ಚಿತ್ರ ಮೂಡಬೇಕು..
ಚಿತ್ರಕ್ಕೂ—ಚಿ೦ತನೆಗೂ ಇರುವ ನ೦ಟು ..
ಅದು ನಿಮಗೆ ಒಲಿದಿರುವ ಗ೦ಟು ..
ನಿಮಗೆ ನನ್ನ ಶುಭ ಹಾರೈಕೆ ..
ಧನ್ಯವಾದಗಳು ಪ್ರಸಾದ್ ಗೌಡ.
ಅಳಿಸಿಹಗಲುವೇಶದ ಚಂಚಲ ಭಾಹುಗಳ ಸುಟ್ಟು
ಪ್ರತ್ಯುತ್ತರಅಳಿಸಿಸುಡುತ್ತಲೇ ಬೆಳಗಿದೆ ಕತ್ತಲ ಜ್ಜೋತಿ
ಆಹಾ ನಿಮ್ಮಿಂದ ಮಾತ್ರ ಸಾಧ್ಯ ಈ ವರ್ಣನೆ