ಸೋಮವಾರ, ನವೆಂಬರ್ 28, 2011

ನಿತ್ಯ ಸುಮಂಗಲಿ

ನಲುಮೆಯ ನುಡಿಗಳನಾಡುತ
ಪ್ರಣಯ ಚೇಷ್ಟೆಗೈಯ್ಯತ
ಪ್ರೇಮ ರಸಧಾರೆಯನ್ನರಿಸಿಹನು
ನನ್ನಾಸೆಗಳನು ಮೆಟ್ಟಿನಿಂತು
ಮೈಮುರಿದು 
ನನ್ನದೆಲ್ಲ ಅವನದೆಂದೇ ಅಧಿಕಾರಿಸಿಹನು


ಭಿಗುಮಾನದ ಏರಿಳಿತದಲಿ
ತುಂಬಿದೆದೆ ತಲ್ಲಣಿಸಿಹುದು

ಇವನಾಗುವನೇ ಎನ್ನ ಮನದಿನಿಯ
ಹಾರೊಡೆದ ಎದೆಯಲಿ
ಬಂಧಿಸಿದ ಆಸೆಗಂಗಳು ಮುಚ್ಚಿ 
ತೆಲಿಹವು ಕನಸಕೊಳದಲಿ


ರವಿ ಬಂದು ಶ್ಯಾಮ ತೊಲಗಿರೇ 
ಒಂಟಿಯಾಗಿಹುದು ಮೈಮನ 
;ವಾರಸುಧಾರನಿಲ್ಲದೆ
ಕಾದು ಕಾತರಿಸಿಹವು ಕಂಗಳು 
ಸುಮಂಗಲಿಯಾಗುವ ನಿತ್ಯ ಕನಸಿನ ಅಮಲಲಿ

ಖಾಲಿ ಹೊಟ್ಟೆಯಲ್ಲಿ ಕನಸುಗಳ ಮೂಟೆಕಟ್ಟಿ 
ಹಸಿದು ಕಾದವರ ತೃಷೆ ನೀಗಲು 
ಹಾಧರಿಸಿರುವೆ..
ಓ... ತೃಷಿಕನೇ ಕಾಣದೇ 
ನಿನ್ನಲ್ಲೆನ್ನ ಆಂತರ್ಯ ಅಂಗಲಾಚಿಹುದು
ನೀಡು ಗರತಿಯಾಗೋ ಚೈತನ್ಯ.


-ಶರತ್ ಚಕ್ರವರ್ತಿ.

4 ಕಾಮೆಂಟ್‌ಗಳು:

  1. ತುಂಬಾ ತುಂಬಾ ಅರ್ಥಪೂರ್ಣವಾಗಿದೆ.ನನಗೆ ಅತ್ಯಂತ ಖುಷಿ ನೀಡಿದ ಕವನವಿದು.ಬಹು ಸೊಗಸಾಗಿ ಸತ್ವಪೋರಿತವಾಗಿ ಬಣ್ಣಿಸಿ ಆಸ್ವಾದಿಸಬಹುದಾದ ಕವನವಿದು.ನಿತ್ಯ ಸುಮಂಗಲಿಯ ಅಂತರಾಳ ಹೊಕ್ಕು ಅವಳ ನೋವು ವೇದನೆ,ಭವಣೆಗಳನ್ನೆಲ್ಲ ಹಸಿ ಹಸಿಯಾಗಿ ಸುಂದರವಾಗಿ ನಿರೂಪಿಸಿದ್ದೀರಿ.

    ಪ್ರತ್ಯುತ್ತರಅಳಿಸಿ