ಸಮಯವ ಕೊಲ್ಲುವುದೇ
ಅದು ಹೇಗೆ...?
ನಿತ್ಯ ಕಾಯಕದೊಳು
ನಿಜಕಾಯವನ್ನೇ ಮರೆತವರ ನಡುವೆ.
ಕಣ ಕಣ ಕ್ಷಣಗಳ ಕುದಿಸಿ
ಧ್ಯಾನಿಸಿ ಮಂತ್ರಿಸುವವರ ನಡುವೆ.
ಕಾಲದೊಡನೆ ಹಠಕ್ಕೆ ಬಿದ್ದು
ಕಾಲವೇ ಕಾಸೆಂಬಂತೆ ಕಾಣುವವರ ನಡುವೆ.
ಅದು ಹೇಗೆ ಸಾಧ್ಯ
ಸಮಯವ ಕೊಲ್ಲಲು...?
ನಾವ್ ಕೊಲ್ಲುವ ನಮ್ಮ ಬೇಸರಗಳ, ಕಾಡುವ
ನೆನಪುಗಳ, ರಚ್ಚೆಗೆ ಹಿಡಿಸುವ ಮನದುದ್ವೇಗಗಳ..
ಕಾಯುವ ಮನಶ್ಯಾಂತಿಯ
ಕಳೆಯದೇ ಈ ಸುಸಮಯವ.
ಶರತ್ ಚಕ್ರವರ್ತಿ
ದಿನಾಂಕ:09.10.2011
ಸಮಯ ಅಮೂಲ್ಯ, ತುಂಬಾ ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿ