ಸೋಮವಾರ, ಸೆಪ್ಟೆಂಬರ್ 26, 2011

ಭ್ರಮಾನಿರತ....!


ಎರಡೇ ಎರಡು ಪುಟ್ಟ ಕಂಗಳನ್ನು ಕೊಟ್ಟನು,
ಬೆಟ್ಟ ಕಣಿವೆ, ಹೊಸ ಚಿಗುರುಗಳಲ್ಲಿ
ಗಿಡ-ಬಳ್ಳಿ, ಸಣ್ಣ ತೊರೆಗಳಲ್ಲಿ
ಚುಂಬಕ ತೆರದಿ ನಿನ್ನಂದ ತುಂಬಿಟ್ಟನು..

ಅರಿಯೇ, ಅದು ಹೇಗೆ ತುಂಬಿಸಿಕೊಳ್ಳಲಿ ನಿನ್ನ
ಸೊಬಗು, ಭಿಂಕ-ಭಿನ್ನಾಣಗಳಿಂದ
ಸೆಳೆವ, ನಯಾ-ನಾಜುಕುಗಳಿಂದ
ತಳತಳಿಸುವ ಅಂದಗಾತಿಯೇ ನಿನ್ನ.

ಸಾಲದು, ಸಾಲ ನೀಡು ನಿನ್ನ ಕಡು ನೀಲ
ಕಂಗಳ, ಹರಿದು ಸಾಗುವ ಮೋಡವ
ತಡೆದು, ಮುದ್ದಿಸಿ ಸೆಳೆದು ಮುತ್ತಿಡುವ
ನಿನ್ನ ಮನದ ಒಳಬಣ್ಣ ನೋಡೊ ಹಂಬಲ


ಚೌಕಟ್ಟಿನೊಳು ಕಟ್ಟಿ ಹಾಕುವ ಸಲುವಾಗಿ ಕ್ಲಿಕ್ಕಿಸಿದೆ
ಪೋಟೋ ಸಾವಿರ ಸಾವಿರ, ಮುತ್ತಿದ ಮಂಜಿನ
ಮುತ್ತಲ್ಲಿ ಮಿಂದ ನಿನ್ನ ತಾಜ ನಗೆಯ ವಿನಃ
ಸೋತು ರಸಹೀನವಾದ ನಿನ್ನದೇ ಪೋಟೋ ಮೊಬ್ಬಾಗಿದೆ..


ಚಿತ್ರಿಸಲೇ ಕುಂಚವನವಲಂಭಿಸಿ...?
ಪದ್ಯವ ಕಟ್ಟಲೆ ಪದಗಳ ತುಂಬಿಸಿ...?

ಕಣ್ಣಂಚಲಿ ಕದ್ದ ಬಣ್ಣವ ಭಿತ್ತಿಯಲಿ ಹೇಗೆ ಇಳಿಸಲಿ
ಮನದಾಳದಲ್ಲಿ ಉದ್ಗಾರದ ದನಿಯೊಂದೇ
ತುಂಬಿರಲು ಪದಗಳನ್ಹೇಗೆ ಮೂಡಿಸಲಿ..


ನಿಶ್ಯಕ್ತನಾಗಿ ಕುಂಚ ಬಣ್ಣಗಳ ಬದಿಗಿಟ್ಟು,
ಬಾವಾ ಪದಗಳ ಖಾಲಿಮೂಟೆಯ ಕೈಬಿಟ್ಟು
ನೋಡುತ ನಿಂತೆನು ನಾನಾಗಿ ಭ್ರಮಾನಿರತ....!









ಶರತ್‌ ಚಕ್ರವರ್ತಿ.
ದಿನಾಂಕ: 24.09.2011
ಬಿಸಲೆ ಸೌಂದರ್ಯ ತಾಣವ ಕುರಿತು ಬರೆದ ಸಾಲುಗಳು.



1 ಕಾಮೆಂಟ್‌:

  1. ಬಿಟ್ಟರೆ ಭಾವುಕನಾಗಿ ಪ್ರಕ್ರುತಿಯಲ್ಲೇ ಲೀನಾ ಆಗ್ಬಿಡ್ತಿಯೇನೋ..?
    ಪ್ರಕ್ರುತಿಯನನ್‌ ಕಂಡಷ್ಟೆ ಸಂತೋಷ ಆಯ್ತು ನಿನ್ ಸಾಲುಗಳ್ನ ಓದಿ

    ಪ್ರತ್ಯುತ್ತರಅಳಿಸಿ