ಭರ್ರೆಂದು ಸಾಗಿದ್ದ ಎನ್ ಹೆಚ್ 66ಓಡಿ ಹೋಗಿ ಹಿಡಿದ
ಕಾಲಿಡಲು ತಾವಿಲ್ಲದ ರಶ್ಸಿನ ಬಸ್ಸು
ಕಾಲಿಡಲು ತಾವಿಲ್ಲದ ರಶ್ಸಿನ ಬಸ್ಸು
ಮಾತಿಲ್ಲದೇ ಬೆವೆತು
ಜಿನುಗುತ್ತಿದ್ದ ಬಿಳಿಚರ್ಮದ ಚಲುವೆಯರು
ತೋಯ್ದು ನೀರಾದ ಅರೆತೆರೆದ ಬೆನ್ನು
ಜಿನುಗುತ್ತಿದ್ದ ಬಿಳಿಚರ್ಮದ ಚಲುವೆಯರು
ತೋಯ್ದು ನೀರಾದ ಅರೆತೆರೆದ ಬೆನ್ನು
ಹೊಳೆವ ಮಿನುಗು ಮೂಗುತಿ ಮಿಂಚು
ಸೂಸು ಬರುತ್ತಿದ್ದ ಕಂಕುಳ
ಕಮಟು ಗಂಧ
ಸೂಸು ಬರುತ್ತಿದ್ದ ಕಂಕುಳ
ಕಮಟು ಗಂಧ
ವೇಗಮಿತಿ ಮರೆತ ಚಾಲಕ
"ಹೆಮ್ಮಾಡಿ ತಲ್ಲೂರು
ಕುಂದಾಪುರ" ಎಂದು
"ಹೆಮ್ಮಾಡಿ ತಲ್ಲೂರು
ಕುಂದಾಪುರ" ಎಂದು
ವೇದಘೋಷ ನುಡಿದಿದ್ದ ಕಂಡಕ್ಟರ್ ಮೌಲ್ವಿ
ಕಿಟಕಿ ನಡುವೆ ತಣ
ತಣಗುಡುತ್ತಿದ್ದ ಹೊಳೆ-ಕಡಲ ಸಂಗಮ
ಕಿಟಕಿ ನಡುವೆ ತಣ
ತಣಗುಡುತ್ತಿದ್ದ ಹೊಳೆ-ಕಡಲ ಸಂಗಮ
ಬೆಸ್ತರ ಬಂಧಿಸಿದ್ದ ಮೀನುಬಲೆ
ಹಿಮ್ಮುಗ ಓಟದ ಕಾಂಕ್ರಿಟು ಸೇತುವೆ
ಹೆಂಡತಿಯ ಪ್ರಸವಕ್ಕೆಂದು
ಓಡಿ ಹೋಗುತ್ತಿದ್ದಕೈಗಡಿಯಾರದ ಮುಳ್ಳು.
-ಶರತ್ ಚಕ್ರವರ್ತಿ.
-ಶರತ್ ಚಕ್ರವರ್ತಿ.
ಒಂದು ಬಸ್ ಪ್ರಯಾಣದಲ್ಲಿ ಅನುಭವಕ್ಕೆ ಸಿಗಬಹುದಾದ ಎಲ್ಲಾ ಭಾವಗಳನ್ನು ಒಕ್ಕಣಿಸಿ ಕವಿತೆಯಾಗಿಸಿದ್ದೀರಿ ಶರತ್.. ಚೆನ್ನಾಗಿ ಬಂದಿದೆ.. ಕವಿತೆಗೆ ಇನ್ನಷ್ಟು ಉಪ್ಪುಖಾರ ಬೆರೆಸಿದ್ದರೆ ಇನ್ನೂ ರುಚಿಸುತ್ತಿತ್ತು ಎನಿಸಿತು.. ಪದಗಳ ಪ್ರಯೋಗ ಮತ್ತು ನಿಮ್ಮ ಶೈಲಿಗೆ ಸಂಪೂರ್ಣ ಅಂಕಗಳನ್ನು ಬಾಚುತ್ತೀರಿ..:)
ಪ್ರತ್ಯುತ್ತರಅಳಿಸಿಉಪ್ಪು ಖಾರ ಬೆರೆಸದೇ ಹಸಿ ಪದಾರ್ಥ ಬಡಿಸುವ ಸಲುವಾಗಿಯೇ ಈ ಪ್ರಯತ್ನ ಮಾಡಿದೆ ಗೆಳೆಯ ಪ್ರಸಾದ್, ಧನ್ಯವಾದಗಳು ನಿನ್ನ ಮೆಚ್ಚುಗೆಗೆ.
ಅಳಿಸಿಒಂದೇ ಉಸಿರಿನಲ್ಲಿ ಹಾಡುವ ಹಾಡಿನಂತೆ ಇದೆ, ಇಂತಹ ಪ್ರಯೋಗಗಳು ಹೆಚ್ಚು ಹೆಚ್ಚು ನಡೆಯುತ್ತಿರಲಿ ಗೆಳೆಯ.
ಪ್ರತ್ಯುತ್ತರಅಳಿಸಿ_ಮಧುಚಂದ್ರ.